ಬಾದಾಮಿಯಲ್ಲಿ ಎಎಪಿ ಸಾಂಸ್ಕೃತಿಕ ಯುವ ಉತ್ಸವಕ್ಕೆ ಲೋಹಿತ್ ಹನುಮಾಪುರ ಚಾಲನೆ
- lohi275
- Feb 14, 2024
- 1 min read
ಬಾದಾಮಿಯಲ್ಲಿ ಸೋಮವಾರ ರಾತ್ರಿ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಪ್ರಯುಕ್ತ ಆಮ್ ಆದ್ಮಿ ಪಾರ್ಟಿ ಸಾಂಸ್ಕೃತಿಕ ಯುವ ಉತ್ಸವ ಮತ್ತು ಯುವ ಘಟಕದ ಪದಗ್ರಹಣ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಎಎಪಿ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ಚಾಲನೆ ನೀಡಿದರು.ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ಶುಭ ಕೋರಿ, ಆಮ್ ಆದ್ಮಿ ಪಕ್ಷದ ಬಾದಾಮಿ ತಾಲೂಕು ಯುವ ಘಟಕ ಮತ್ತಷ್ಟು ಹುಮ್ಮಸ್ಸಿನಿಂದ ಜನರ ಕೆಲಸ ಮಾಡಲಿ ಎಂದು ಆಶಿಸಿದರು.











Comments